Sai Luck World

Sai Luck World ಆತ್ಮೀಯರೇ, ನಿಮ್ಮ ಬಗ್ಗೆ ನೀವು ತಿಳಿದು ಕೇಳುವುದಕ್ಕಿಂತ ಮೊದಲು ಈ ಪ್ರಪಂಚದ ಸೃಷ್ಠಿಯ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಕಣ್ಣಿಗೆ ಕಾಣದ ಯಾವುದೋ ಬಲವಾದ ಶಕ್ತಿ ಸೃಷ್ಟಿಯಲ್ಲಿದೆ. ಇದು ಕಣ್ಣಿಗೆ ಕಾಣದಿದ್ದರೂ ಪ್ರತಿಯೊಬ್ಬರಿಗೂ ಅನುಭವವಾಗುತ್ತದೆ. ಆದರೆ ಈ ಶಕ್ತಿ 9 ಗ್ರಹಗಳ ಮೂಲಕ 27 ನಕ್ಷತ್ರಗಳ ಮೂಲಕ 12 ರಾಶಿಗಳ ಹಾಗೇ ಈ ಭೂಮಿಯ 5 ಪಂಚಭೂತಗಳ ಮೂಲಗಳ ಪ್ರತಿ ಮಾನವ ಜೀವರಾಶಿಯ ಮೇಲೆ ಒಂದಲ್ಲ ಒಂದು ವಿಧವಾದ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ತನ್ನ ಪ್ರಭಾವದಿಂದ ಆಯಾ ಮನುಷ್ಯನ ಜನ್ಮ ದಿನಾಂಕ/ತಿಂಗಳು/ವರ್ಷದ ಮುಖಾಂತರ ಆತನ/ಅವಳ ಹಿಂದಿನ ಜನ್ಮದ ಪಾಪ ಪುಣ್ಯಾನುಸಾರವಾಗಿ ಕೆಲಸ ಮಾಡುತ್ತಲೇ ಇದ್ದು ಪ್ರತಿ ಮಾನವ ಜೀವರಾಶಿಯನ್ನು ತನ್ನ ನಿಯಂತ್ರಣದಲ್ಲಿಟ್ಟು ಕೊಂಡಿದೆ. ಮಾನವ ಬಾಲ್ಯ / ಯೌವ್ವನ / ಮುಪ್ಪು ಎಲ್ಲವು ವಿಧಿಯ ನಿಯಂತ್ರಣದಲ್ಲಿರುತ್ತದೆ. ನಮ್ಮದು ಎನ್ನುವುದು ಈ ಪ್ರಪಂಚದಲ್ಲಿ ಯಾವುದು ಇಲ್ಲ. ನೀವು ಹೆಣ್ಣಾಗಲಿ/ಗಂಡಾಗಲಿ ನೀವು ಯಾವ ದಿನಾಂಕ/ತಿಂಗಳು/ವರ್ಷದಲ್ಲಿ ಹಿಟ್ಟಿದ್ದೀರಿ ನಿಮ್ಮ ತಂದೆ-ತಾಯಿಗಳ ಪುಣ್ಯ ಪಾಪಗಳ ಪ್ರಭಾವೇನು? ಹಿಂದಿನ ಜನ್ಮದ ಪಾಪ ಪುಣ್ಯಗಳ ಪ್ರಭಾವವೇನು? ಇವೆಲ್ಲವು ಈ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ನೀವು ಹುಟ್ಟುವುದಕ್ಕಿಂತ ಹಿಂದೆ ನಿಮ್ಮ ತಂದೆ/ತಾಯಿಗಳು ಏನಾದರೂ ಪಾಪ ಕರ್ಮವೇನಾದರೂ ಮಾಡಿದ್ದರೆ ಆ ಪಾಪ ಕರ್ಮಗಳ ಫಲವನ್ನು ನೀವು ಹಂಚಿಕೊಂಡು ಹುಟ್ಟುತ್ತೀರಿ. ನೀವು ಇದನ್ನು ಪರಿಹರಿಸಿ ಕೊಳ್ಳದಿದ್ದರೆ ನಿಮ್ಮ ಮಕ್ಕಳು ಇದನ್ನು ಹಿಂಚಿಕೊಂಡು ಹುಟ್ಟುತ್ತಾರೆ. ನಂತರ ನೀವು ನಿಮ್ಮ ಜೀವನದ ಹಂತ ಹಂತಗಳಲ್ಲಿ ನಾನಾ ರೀತಿಯಾಗಿ ಅನುಭವಿಸುತ್ತೀರಿ. ನೀವು ಈ ಕರ್ಮಕಳೆದು ಕೊಳ್ಳದಿದ್ದರೆ ನಿಮಗೆ ಹುಟ್ಟುವ ಮಕ್ಕಳಿಗೆ ಇದು ಹಂಚಿಹೋಗಿ ಅವರು ಮುಂದೆ ಅನುಭವಿಸುತ್ತಾರೆ. ಒಳ್ಳೆಯದು ಮಾಡಿದ್ದರೆ ಒಳ್ಳೆಯದು ಕೆಟ್ಟದ್ದು ಮಾಡಿದ್ದರೆ ಕೆಟ್ಟದ್ದು ಇದು ಸೃಷ್ಟಿ ನಿಯಮ. ಆದ್ದರಿಂದ ಪ್ರತಿಯೊಬ್ಬರಿಗೂ ಹೇಳುವುದು ಇಷ್ಟೆ ಪ್ರತಿ ಮನುಷ್ಯನಿಗೆ ಕಷ್ಟ ಸುಖ ಪ್ರಾರಂಭವಾಗುವುದು. ಆದ್ದರಿಂದ ಪ್ರತಿಯೊಬ್ಬರಿಗೂ ಈ ಸತ್ಯವನ್ನು ತಿಳಿದುಕೊಳ್ಳಲು ಅವರವರ ಕರ್ಮ ಬಿಡುವುದಿಲ್ಲ ತಿಳಿದು ಕೊಳ್ಳುವಷ್ಟರಲ್ಲಿ ಎಲ್ಲ ಮುಗಿದು ಹೋಗಿರುತ್ತದೆ. ಇಂದು ಪ್ರತಿಯೊಬ್ಬರು ಕಷ್ಟ ಬಂದಾಗ ಮಾತ್ರ ಜೋತಿಷ್ಯ, ದೇವರು ಪರಿಹಾರ ಎಂದೆಲ್ಲ ಹೋಗುವುದು ಇಲ್ಲದಿದ್ದರೆ ಯಾವುದು ಜ್ಞಾಪಕಕ್ಕೆ ಬರುವುದಿಲ್ಲ. ಇದು ಬಹಳವಾದ ತಪ್ಪು.
12.8623278373653 77.6673992662943
MAKE AN ENQUIRY
SEND
SHARE WITH OTHERS
Open on Sunday - Monday from 9:30AM to5:30PM
Wednesday - Saturday from 9:30AM to 5:30PM
See new updates

ಆತ್ಮೀಯರೇ,

ನಿಮ್ಮ ಬಗ್ಗೆ ನೀವು ತಿಳಿದು ಕೇಳುವುದಕ್ಕಿಂತ ಮೊದಲು ಈ ಪ್ರಪಂಚದ ಸೃಷ್ಠಿಯ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಕಣ್ಣಿಗೆ ಕಾಣದ ಯಾವುದೋ ಬಲವಾದ ಶಕ್ತಿ ಸೃಷ್ಟಿಯಲ್ಲಿದೆ. ಇದು ಕಣ್ಣಿಗೆ ಕಾಣದಿದ್ದರೂ ಪ್ರತಿಯೊಬ್ಬರಿಗೂ ಅನುಭವವಾಗುತ್ತದೆ. ಆದರೆ ಈ ಶಕ್ತಿ 9 ಗ್ರಹಗಳ ಮೂಲಕ 27 ನಕ್ಷತ್ರಗಳ ಮೂಲಕ 12 ರಾಶಿಗಳ ಹಾಗೇ ಈ ಭೂಮಿಯ 5 ಪಂಚಭೂತಗಳ ಮೂಲಗಳ ಪ್ರತಿ ಮಾನವ ಜೀವರಾಶಿಯ ಮೇಲೆ ಒಂದಲ್ಲ ಒಂದು ವಿಧವಾದ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ತನ್ನ ಪ್ರಭಾವದಿಂದ ಆಯಾ ಮನುಷ್ಯನ ಜನ್ಮ ದಿನಾಂಕ/ತಿಂಗಳು/ವರ್ಷದ ಮುಖಾಂತರ ಆತನ/ಅವಳ ಹಿಂದಿನ ಜನ್ಮದ ಪಾಪ ಪುಣ್ಯಾನುಸಾರವಾಗಿ ಕೆಲಸ ಮಾಡುತ್ತಲೇ ಇದ್ದು ಪ್ರತಿ ಮಾನವ ಜೀವರಾಶಿಯನ್ನು ತನ್ನ ನಿಯಂತ್ರಣದಲ್ಲಿಟ್ಟು ಕೊಂಡಿದೆ.

ಮಾನವ ಬಾಲ್ಯ / ಯೌವ್ವನ / ಮುಪ್ಪು ಎಲ್ಲವು ವಿಧಿಯ ನಿಯಂತ್ರಣದಲ್ಲಿರುತ್ತದೆ. ನಮ್ಮದು ಎನ್ನುವುದು ಈ ಪ್ರಪಂಚದಲ್ಲಿ ಯಾವುದು ಇಲ್ಲ. ನೀವು ಹೆಣ್ಣಾಗಲಿ/ಗಂಡಾಗಲಿ ನೀವು ಯಾವ ದಿನಾಂಕ/ತಿಂಗಳು/ವರ್ಷದಲ್ಲಿ ಹಿಟ್ಟಿದ್ದೀರಿ ನಿಮ್ಮ ತಂದೆ-ತಾಯಿಗಳ ಪುಣ್ಯ ಪಾಪಗಳ ಪ್ರಭಾವೇನು? ಹಿಂದಿನ ಜನ್ಮದ ಪಾಪ ಪುಣ್ಯಗಳ ಪ್ರಭಾವವೇನು? ಇವೆಲ್ಲವು ಈ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ನೀವು ಹುಟ್ಟುವುದಕ್ಕಿಂತ ಹಿಂದೆ ನಿಮ್ಮ ತಂದೆ/ತಾಯಿಗಳು ಏನಾದರೂ ಪಾಪ ಕರ್ಮವೇನಾದರೂ ಮಾಡಿದ್ದರೆ ಆ ಪಾಪ ಕರ್ಮಗಳ ಫಲವನ್ನು ನೀವು ಹಂಚಿಕೊಂಡು ಹುಟ್ಟುತ್ತೀರಿ. ನೀವು ಇದನ್ನು ಪರಿಹರಿಸಿ ಕೊಳ್ಳದಿದ್ದರೆ ನಿಮ್ಮ ಮಕ್ಕಳು ಇದನ್ನು ಹಿಂಚಿಕೊಂಡು ಹುಟ್ಟುತ್ತಾರೆ.

ನಂತರ ನೀವು ನಿಮ್ಮ ಜೀವನದ ಹಂತ ಹಂತಗಳಲ್ಲಿ ನಾನಾ ರೀತಿಯಾಗಿ ಅನುಭವಿಸುತ್ತೀರಿ. ನೀವು ಈ ಕರ್ಮಕಳೆದು ಕೊಳ್ಳದಿದ್ದರೆ ನಿಮಗೆ ಹುಟ್ಟುವ ಮಕ್ಕಳಿಗೆ ಇದು ಹಂಚಿಹೋಗಿ ಅವರು ಮುಂದೆ ಅನುಭವಿಸುತ್ತಾರೆ. ಒಳ್ಳೆಯದು ಮಾಡಿದ್ದರೆ ಒಳ್ಳೆಯದು ಕೆಟ್ಟದ್ದು ಮಾಡಿದ್ದರೆ ಕೆಟ್ಟದ್ದು ಇದು ಸೃಷ್ಟಿ ನಿಯಮ. ಆದ್ದರಿಂದ ಪ್ರತಿಯೊಬ್ಬರಿಗೂ ಹೇಳುವುದು ಇಷ್ಟೆ ಪ್ರತಿ ಮನುಷ್ಯನಿಗೆ ಕಷ್ಟ ಸುಖ ಪ್ರಾರಂಭವಾಗುವುದು. ಆದ್ದರಿಂದ ಪ್ರತಿಯೊಬ್ಬರಿಗೂ ಈ ಸತ್ಯವನ್ನು ತಿಳಿದುಕೊಳ್ಳಲು ಅವರವರ ಕರ್ಮ ಬಿಡುವುದಿಲ್ಲ ತಿಳಿದು ಕೊಳ್ಳುವಷ್ಟರಲ್ಲಿ ಎಲ್ಲ ಮುಗಿದು ಹೋಗಿರುತ್ತದೆ. ಇಂದು ಪ್ರತಿಯೊಬ್ಬರು ಕಷ್ಟ ಬಂದಾಗ ಮಾತ್ರ ಜೋತಿಷ್ಯ, ದೇವರು ಪರಿಹಾರ ಎಂದೆಲ್ಲ ಹೋಗುವುದು ಇಲ್ಲದಿದ್ದರೆ ಯಾವುದು ಜ್ಞಾಪಕಕ್ಕೆ ಬರುವುದಿಲ್ಲ. ಇದು ಬಹಳವಾದ ತಪ್ಪು.

Latest Updates